PARAKRAM DIVAS on 23rd Jan, 2021

Co-curricular

KLE Society’s Jagadguru Gangadhar Commerce College NSS Unit Celebrated  PARAKRAM DIVAS on Occasion of Subhash Chandra Bose’s 125th Birthday on 23/01/2021.

ಕೆ ಎಲ್ ಇ ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯ
ದಿನಾಂಕ 23/01/2021 ರಂದು ಬೆಳಿಗ್ಗೆ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನಾಚರಣೆಯನ್ನು ಪರಾಕ್ರಮ ದಿವಸ್ ಎಂದು ಎನ್ ಎಸ್ ಎಸ್ ಘಟಕ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇವರ ಸಹಯೋಗದಲ್ಲಿ ಆಚರಿಸಲಾಯಿತು
ಮುಖ್ಯ ಅತಿಥಿಗಳಾಗಿ ಶ್ರೀ ಯುತ ಪ್ರಥ್ವಿ ಕುಮಾರ್ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಅ.ಬಾ.ವಿ.ಪ, ಹುಬ್ಬಳ್ಳಿ , ವಿದ್ಯಾರ್ಥಿಗಳನ್ನು ಉದ್ದೇಶಿಸಿ,”ಇಂದು ಯುವಕರಿಂದ ದೇಶ ಕಟ್ಟುವ ಕಾರ್ಯವಾಗಬೆಗಿದೆ. ಸುಭಾಷ್ ಚಂದ್ರ ಬೋಸರ ಸಿಂಹ ವಾಣಿಯ ಸ್ಪೂರ್ತಿಯಿಂದ ಪ್ರತಿ ಮನೆ ಮನೆಗಳಿಂದ ಸಹಸ್ರ ಸಂಖ್ಯೆಯಲ್ಲಿ ಮತ್ತೆ ಇಂತಹ ಮಹಾನ್ ಶಕ್ತಿ ಹುಟ್ಟಿ ಬರಬೇಕು ಎಂದು ಆವೆಶ ಭರಿತರಾಗಿ ಮಾತನಾಡಿದರಲ್ಲದೆ ವಿದ್ಯಾರ್ಥಿಗಳಲ್ಲಿ ಕ್ರಾಂತಿಯ ಕಿಡಿಯನ್ನು ಹೊತ್ತಿಸಿದರು.,
ಅಧ್ಯಕ್ಷತೆ ವಹಿಸಿದ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ ಎಸ್ ಎ ಗಣಿ ಅವರು ಮಾತನಾಡುತ್ತಾ, “ಇಂದಿಗೆ ಸರಿಯಾಗಿ ೧೨೫ ವರ್ಷಗಳ ಹಿಂದೆ ಜನಿಸಿದ ಬಾಲಕ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎಂದು ಧೈರ್ಯದಿಂದ ನುಡದಿದ್ದನೆಂದರೆ ಎಂತಹ ಮಹಾನ್ ವ್ಯಕ್ತಿತ್ವ ಸುಭಾಷ್ ಚಂದ್ರ ಬೋಸ್ ಅವರದು ಎಂದರಲ್ಲದೆ, ಕೇವಲ ಮೋಬೈಲ್ ಹಾಗೂ ದುಶ್ಚಟಗಳಿಗೆ ದಾಸರಾಗದೆ, ದೇಶ ಪ್ರೇಮ ಹಾಗೂ ಭಾವೈಕ್ಯತೆಯತ್ತ ಒಲವು ತೋರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು,
ವೇದಿಕೆಯ ಮೇಲೆ ಪ್ರೊ ಸುಜಾತ ಎಸ್ ಪಾಟಿಲ್, ಬಸವರಾಜ ದೊಣಿ, ಕುಮಾರ್ ಪವನ ಬಡಿಗೇರ, ಕುಮಾರಿ ರೇಣುಕಾ ಲದ್ದಿ ಉಪಸ್ಥಿತರಿದ್ದರು. ಕುಮಾರಿ ಕೀರ್ತಿ ಹಾಗೂ ಸಂಗಡಿಗರು ದೇಶ ಭಕ್ತಿ ಗೀತೆ ಹೇಳಿದರು, ಕುಮಾರ್ ಆದರ್ಶ ಮುಲಿಮನಿ ಸುಭಾಷ್ ಚಂದ್ರ ಬೋಸರ ಕುರಿತು ಮಾತನಾಡಿದರು ಕುಮಾರಿ ಅರ್ಪಿತಾ ಕೊಪ್ಪದ ವಂದಿಸಿದರು